ಹೌದು, ಸನ್ನಿ ಲಿಯೋನ್ ಮುಂಬೈನ ಓಶಿವಾರ ಪ್ರದೇಶದ ವೀರ್ ಸಿಗ್ನೇಚರ್ ಬಿಲ್ಡಿಂಗ್‌ನಲ್ಲಿ ಹೊಸ ಕಮರ್ಷಿಯಲ್ ಆಫೀಸ್ ಖರೀದಿಸಿದ್ದು, 8 ಕೋಟಿ ರೂಪಾಯಿ ಮೌಲ್ಯದ ಈ ಆಸ್ತಿಯು 1,904.91 ಚದರ ಅಡಿ ಕಾರ್ಪೆಟ್ ಏರಿಯಾ ಹೊಂದಿದೆ. ಬಾಲಿವುಡ್‌ನ ಹಲವಾರು ಸ್ಟಾರ್ಸ್ ಈ ಬಿಲ್ಡಿಂಗ್‌ನಲ್ಲಿ ಆಫೀಸ್ ಹೊಂದಿರುವುದರಿಂದ, ಇದು ಪ್ರೀಮಿಯಂ ಕಮರ್ಷಿಯಲ್ ಹಬ್ ಆಗಿ ಪರಿಗಣಿಸಲ್ಪಡುತ್ತದೆ. ಈ ಖರೀದಿಯು ಸನ್ನಿ ಲಿಯೋನ್ ಅವರ ಮುಂಬೈ ಆಸ್ತಿ ಸಂಪತ್ತಿನಲ್ಲಿ ಮತ್ತೊಂದು ಪ್ರಮುಖ ಸೇರ್ಪಡೆಯಾಗಿದೆ.