ಬೆಂಗಳೂರು: ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ ಹಾಗೂ ಸೋಪುಗಳ ಮಾರಾಟವನ್ನು ನಿಷೇಧಿಸಲು ಅರಣ್ಯ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿದೆ.
ನದಿ ತೀರದಲ್ಲಿ ಭಕ್ತಾದಿಗಳು ಸೋಪು ಮತ್ತು ಶಾಂಪೂ ಬಳಸಿ ಸ್ನಾನ ಮಾಡುವ ಪ್ರಮಾಣ ಹೆಚ್ಚಾಗಿದ್ದು, ಬಳಕೆ ನಂತರ ಅರ್ಧ ಖಾಲಿಯಾದ ಪ್ಯಾಕೆಟ್‌ಗಳನ್ನು ನದಿಯಲ್ಲಿ ವಿಸರ್ಜಿಸುತ್ತಿದ್ದರು. ಇದರಿಂದ ನದಿ ನೀರು ಮಾಲಿನ್ಯಗೊಂಡು ಪರಿಸರಕ್ಕೆ ಹಾನಿ ಉಂಟಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ನದಿ ದಡಗಳಲ್ಲಿ ಸೋಪು ಮತ್ತು ಶಾಂಪೂ ಮಾರಾಟವನ್ನು ತಡೆಯಲು ನಿರ್ಬಂಧ ಹೇರಲಾಗಿದ್ದು, ಭಕ್ತರು ತಮ್ಮ ಬಳಕೆದಾರ ವಸ್ತುಗಳನ್ನು ನದಿಗೆ ಹರಿಯಬಾರದು ಎಂಬುದಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ.