ಮಹಾ ಕುಂಭ ಮೇಳ 2025ನಲ್ಲಿ ಭಕ್ತಾದಿಗಳ ಭಾರೀ ಪ್ರವಾಹದಿಂದ ಪ್ರಯಾಗ್‌ರಾಜ್‌ನಲ್ಲಿ ಅಪಾಯಕಾರಿ ಜನಸಂದಣಿ ಸ್ಥಿತಿ ಉಂಟಾಗಿದೆ.
ನೂಕುನುಗ್ಗಲು ಮತ್ತು ಅವಘಡದ ಪ್ರಮುಖ ವಿಚಾರಗಳು:
🔹 ಸಂಗಮದಿಂದ ಕಿಲೋ ಮೀಟರ್‌ಗಳ ದೂರದಲ್ಲೇ ಭಾರೀ ಜನಜಾತ್ರೆ
🔹 ಬ್ಯಾರಿಕೇಡ್‌ಗಳು ಮುರಿದು ಬಿದ್ದು ಸಂಚಾರಕ್ಕೆ ತೊಂದರೆ
🔹 ನೂಕುನುಗ್ಗಲು ನಡುವೆ ಕೆಲವು ಮಹಿಳೆಯರು ಪ್ರಜ್ಞೆ ಕಳೆದುಕೊಂಡರು
🔹 ಕಾಲ್ತುಳಿತದ ಪರಿಣಾಮ ಗಂಭೀರ ಗಾಯಗಳು
ಗಾಯಾಳುಗಳಿಗೆ ತಕ್ಷಣದ ಚಿಕಿತ್ಸಾ ಕ್ರಮಗಳು:
🏥 ಮಹಾ ಕುಂಭ ಮೇಳ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಲಾಗಿದೆ
🏥 ಗಂಭೀರ ಗಾಯಾಳುಗಳನ್ನು ಬೆಲಿ ಆಸ್ಪತ್ರೆ ಮತ್ತು ಸ್ವರೂಪ್ ರಾಣಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ
ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ನಿಯಂತ್ರಣ ಮತ್ತು ವ್ಯವಸ್ಥಿತ ನಿರ್ವಹಣೆಯ ಅಗತ್ಯತೆ ಹೆಚ್ಚಾಗಿದೆ. ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಂಡಿದ್ದು, ಭಕ್ತಾದಿಗಳಿಗೆ ಸೂಕ್ತ ನೆರವು ಒದಗಿಸಲು ಶ್ರಮಿಸುತ್ತಿದ್ದಾರೆ.
ಮೋದಿಯವರೊಂದಿಗೆ ನಾಲ್ಕು ಬಾರಿ ಫೋನ್ ಕರೆಯಲ್ಲಿ ಮಾತುಕತೆ:
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದರಿಂದ ಸ್ಥಳದಲ್ಲಿ ಒತ್ತಡವು ಹೆಚ್ಚಾಗಿದೆ. 8-10 ಕೋಟಿ ಭಕ್ತರು ಸೇರುವ ನಿರೀಕ್ಷೆಯಿದೆ, ಮತ್ತು ಸಂಗಮ ತುದಿಗೆ ಎಲ್ಲರೂ ಸಾಗುತ್ತಿರುವುದರಿಂದ ಗತಿಭದ್ಧತೆ ಉಂಟಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಖಾಡ ಮಾರ್ಗದಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಡಲು ಪ್ರಯತ್ನಿಸುತ್ತಿದ್ದಾಗ ಕೆಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮೌನಿ ಅಮಾವಾಸ್ಯೆ ಅವಧಿಯ ಪ್ರಯುಕ್ತ, ಮಂಗಳವಾರದಿಂದಲೇ ಹೆಚ್ಚಿನ ಭಕ್ತರು ಭಾಗವಹಿಸಲು ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ.
