ಇಂಧನ ಬೆಲೆ ಹೆಚ್ಚಳ ಮತ್ತು ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳು ಇತ್ತೀಚೆಗೆ ಹೆಚ್ಚಿನ ಜನರ ಗಮನ ಸೆಳೆಯುತ್ತಿವೆ. ಇದರ ಜೊತೆಗೆ, ಬಸ್ ಮತ್ತು ಮೆಟ್ರೊ ಟಿಕೆಟ್ ದರಗಳ ಏರಿಕೆಯಿಂದಾಗಿ ಜನರು ಸ್ವಂತ ವಾಹನಗಳಲ್ಲಿ ಓಡಾಡುವುದು ಹೆಚ್ಚು ಅನುಕೂಲಕರವೆಂದು ಭಾವಿಸುತ್ತಿದ್ದಾರೆ. ಹಣದುಬ್ಬರದಿಂದಾಗಿ ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ಜನರು, ಬಸ್ ಮತ್ತು ಮೆಟ್ರೊ ದರಗಳು ಏರುತ್ತಿರುವುದರಿಂದ, ಅದೇ ಖರ್ಚಿನಲ್ಲಿ ಸ್ವಂತ ವಾಹನವನ್ನು ಖರೀದಿಸುವುದು ಉತ್ತಮ ಎಂದು ಅಭಿಪ್ರಾಯಪಡುತ್ತಿದ್ದಾರೆ.
ಜನರ ಈ ಬವಣೆಯನ್ನು ಬಂಡವಾಳವನ್ನಾಗಿ ಮಾಡಿಕೊಳ್ಳಲು ಹೊರಟಿರುವ ಕಂಪನಿಗಳು, ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಸ್ಪರ್ಧೆ ಮಾಡುತ್ತಾ ಹೊಸ ಹೊಸ ಆವಿಷ್ಕಾರಗಳಿಗೆ ಮುಂದಾಗಿವೆ.
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದ್ದ ಮುಖೇಶ್ ಅಂಬಾನಿ ಅವರ ಮಾಲೀಕತ್ವದ ರಿಲಯನ್ಸ್ ಜಿಯೋ, ಅಗ್ಗದ ದರದ ಸಿಮ್ ಮತ್ತು ಫೋನ್ ಸೇವೆಗಳ ನಂತರ, ಇದೀಗ ಪರಿಣಾಮಕಾರಿ ಬದಲಾವಣೆಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ಎಲೆಕ್ಟ್ರಿಕ್ ಕಾರು ಮತ್ತು ಬೈಕ್‌ಗಳ ನಂತರ, ಈಗ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಜಿಯೋ ಮುಂದಾಗಿದೆ.
ಪರಿಸರ ಮತ್ತು ಆರೋಗ್ಯವನ್ನು ಸಂರಕ್ಷಿಸುವ ಉದ್ದೇಶದಿಂದ ಜಿಯೋ ಕಂಪನಿ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳಲ್ಲಿ ಟ್ರಾಫಿಕ್ ಜಾಮ್‌ನಿಂದ ಬಳಲುತ್ತಿರುವ ಜನರ ಸಮಸ್ಯೆಗೆ ಪರಿಹಾರವನ್ನು ನೀಡಲು ಈ ಹೊಸ ಯೋಜನೆಯನ್ನು ರೂಪಿಸಲಾಗಿದೆ.
ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಡಿಜಿಟಲ್ ಸೇವಾ ಪೂರೈಕೆದಾರ ಕಂಪನಿಯಾದ ಜಿಯೋ, ಈಗ ಎಲೆಕ್ಟ್ರಿಕ್ ಬೈಕ್ ಕಲ್ಪನೆಯನ್ನು ಮುಂದಿಟ್ಟಿದೆ. ವಿದ್ಯುತ್ ಚಾಲಿತ ಸೈಕಲ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಎಲೆಕ್ಟ್ರಿಕ್ ಸೈಕಲ್‌ನ ವಿಶೇಷತೆ ಎಂದರೆ, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, ಸುಮಾರು 80 ಕಿಲೋಮೀಟರ್ ವರೆಗೆ ಚಲಿಸಬಲ್ಲದು. ಇದೊಂದು ಹೈ-ಟೆಕ್ ಎಲೆಕ್ಟ್ರಿಕ್ ಸೈಕಲ್ ಎಂದು ಕಂಪನಿ ಹೇಳಿಕೊಂಡಿದೆ.