
ಮಹಾ ಕುಂಭಮೇಳದಲ್ಲಿ ಮಣಿಗಳ ಸರಗಳನ್ನು ಮಾರುತ್ತಿರುವ ಈ ಹುಡುಗಿಯ ಹೆಸರು ಮೊನಾಲಿಸಾ ಇವಳೇ ಈ ವೈರಲ್ ಆಗುತ್ತಿರುವ ಸುಂದರ ಕಣ್ಣಿನ ಹುಡುಗಿ. ಮೊನಾಲಿಸಾ ಹಾಗೂ ಆಕೆಯ ತಂಗಿ ಮಹಾ ಕುಂಭಮೇಳ ಮಾತ್ರವಲ್ಲ ಎಲ್ಲಿ ಜನ ದಟ್ಟಣೆ ಇರುತ್ತದೆಯೋ ಅಲ್ಲಿ ಮಣಿ ಸರಗಳನ್ನು, ಹೂವುಗಳನ್ನು ಮಾರಿ ತಮ್ಮ ಜೀವನ ನಡೆಸುತ್ತಿದ್ದಾರಂತೆ.
ನೋಡಲು ಬಹು ಆಕರ್ಷಕವಾಗಿರುವ ಮೊನಾಲಿಸಾ ತಮ್ಮ ನಗು ಮುಖದಿಂದಲೇ ಎಲ್ಲರನ್ನೂ ಮಾತನಾಡಿಸಿ ಮಣಿಗಳ ಸರಗಳು ಹಾಗೂ ರುದ್ರಾಕ್ಷಿ ಸರಗಳ ಮಾರಾಟ ಮಾಡುತ್ತಿದ್ದಾರೆ. ಸದ್ಯ ಈಕೆಯ ಹಲವು ವಿಡಿಯೋಗಳು ವೈರಲ್ ಆಗುತ್ತಿದ್ದು, ಆಕೆಗೆ ನಟನೆಯಲ್ಲಿ ಆಸಕ್ತಿ ಇದ್ದರೆ, ಯಾರಾದರೂ ಪುಣ್ಯಾತ್ಮ ಆಕೆಗೆ ಒಂದು ಅವಕಾಶ ಕೊಟ್ಟರೆ ಚಿತ್ರರಂಗಕ್ಕೆ ಅಥವಾ ಕಿರುತೆರೆಗೆ ಬೆಸ್ಟ್ ಹಿರೋಯಿನ್ ಎಂದು ನೆಟ್ಟಿಗರು ಮೊನಾಲಿಸಾ ವಿಡಿಯೋಗೆ ಕಮೆಂಟ್ ಹಾಕುತ್ತಿದ್ದಾರೆ.