ನರೇಂದ್ರ ಮೋದಿ ಇಂದು ತಮ್ಮ ಮಾಸಿಕ ರೇಡಿಯೋ ಪ್ರಸಾರ ’ಮನ್ ಕಿ ಬಾತ್’ನ ೧೧೯ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಶೇಕಡಾ ೪ರಷ್ಟು ಇದೆ ಎಂದು ತಿಳಿಸಿ, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಅವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ಒತ್ತಿಹೇಳಿದ್ದಾರೆ.
ದೇಹದಲ್ಲಿ ಬೊಜ್ಜು ಹಲವು ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಪ್ರಸ್ತುತ, ಎಂಟು ಜನರಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಶೇಕಡಾ ೪ರಷ್ಟು ಇದೆ. ಇದನ್ನು ನಿಯಂತ್ರಿಸಲು, ಶೇಕಡಾ ೧೦ ಕಡಿಮೆ ಅಡುಗೆ ಎಣ್ಣೆ ಬಳಸುವ ಮೂಲಕ ಬೊಜ್ಜನ್ನು ಕಡಿಮೆ ಮಾಡಬಹುದು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.