ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಝೋಮ್ಯಾಟೊ ಮತ್ತು ಸ್ವಿಗ್ಗಿ ಡೆಲಿವರಿ ಪಾಟ್ನರ್ಸ್‌ಗಳಿಗೆ “ಹಳದಿ ನಂಬರ್ ಪ್ಲೇಟ್ ಕಡ್ಡಾಯ” ಎಂಬ ವಿಡಿಯೋ ಸುಳ್ಳು ಸುದ್ದಿಯಾಗಿದೆ. ಇದು ನಿಜವಲ್ಲ ಮತ್ತು ಯಾವುದೇ ಅಧಿಕೃತ ಹೇಳಿಕೆ ಅಥವಾ ಸರ್ಕಾರಿ ಆದೇಶವಿಲ್ಲದೆ ಹರಡಲ್ಪಟ್ಟಿದೆ.
ಸುಳ್ಳು ಸುದ್ದಿಯ ವಿವರಗಳು:
- ವಿಡಿಯೋ ವಿಷಯ:
- ಬೆಂಗಳೂರಿನಲ್ಲಿ ಹರದಲ್ಪಟ್ಟ ಈ ವಿಡಿಯೋದಲ್ಲಿ ಹಳದಿ ನಂಬರ್ ಪ್ಲೇಟ್ ಹಾಕಿದ ಬೈಕ್‌ಗಳಿಗೆ ಮಾತ್ರ ಡೆಲಿವರಿ ಮಾಡಲು ಅವಕಾಶವಿದೆ ಎಂದು ಮತ್ತು ಅದನ್ನು ಝೋಮ್ಯಾಟೊ ಮತ್ತು ಸ್ವಿಗ್ಗಿಯಂತಹ ಆನ್‌ಲೈನ್ ಫುಡ್ ಡೆಲಿವರಿ ಪಾಟ್ನರ್ಸ್‌ಗಳಿಗೆ ಕಡ್ಡಾಯ ಎಂದು ಹೇಳಲಾಗುತ್ತಿದೆ.
- ನಿಜಾಂಶ:
- ಈ ವಿಡಿಯೋ ಸುಳ್ಳು ಮಾಹಿತಿಯನ್ನು ಹರಡುತ್ತಿದೆ. ಯಾವುದೇ ಸರ್ಕಾರಿ ಅಧಿಕೃತ ಆದೇಶ ಅಥವಾ ಘೋಷಣೆ ಇದನ್ನು ಬೆಂಬಲಿಸುವುದಿಲ್ಲ.
- ಹಳದಿ ನಂಬರ್ ಪ್ಲೇಟ್‌ಗಳು ವಾಣಿಜ್ಯ ವಾಹನಗಳಿಗೆ ಮಾತ್ರ ಅನ್ವಯಿಸುತ್ತವೆ, ಮತ್ತು ಫುಡ್ ಡೆಲಿವರಿ ಪಾಟ್ನರ್ಸ್‌ಗಳಿಗೆ ಇದು ಕಡ್ಡಾಯವಲ್ಲ.
- ಈ ವೈರಲ್ ಆಗುತಿರುವ ವಿಡಿಯೋ ಸಂಚಾರದ ನಿಯಮವನ್ನು ಪಾಲಿಸದೇ ಇದ್ದ ವಾಹನಗಳಿಗೆ ಮಾತ್ರ (ಇನ್ಶೂರೆನ್ಸ್ , ಲೈಸೆನ್ಸ್ಸ್ & ಮಾಲಿನ್ಯ ತಪಾಸಣೆ ಹಾಗೂ ಇತ್ಯಾದಿ..)
- ಸಾಮಾಜಿಕ ಮಾಧ್ಯಮದ ಪಾತ್ರ:
- ಇಂಟ್ರಾಗ್ರಾಮ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಈ ಸುಳ್ಳು ವಿಡಿಯೋ ವೈರಲ್ ಆಗಿದೆ.
- ಸಾಮಾಜಿಕ ಮಾಧ್ಯಮದಲ್ಲಿ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಹಿಸುವುದು ಮುಖ್ಯ. ಏಕೆ ಎಚ್ಚರವಾಗಿರಬೇಕು?
- ಸುಳ್ಳು ಸುದ್ದಿಗಳು ಜನರಲ್ಲಿ ಗೊಂದಲ ಮತ್ತು ಭಯವನ್ನು ಉಂಟುಮಾಡಬಹುದು.
- ಅಧಿಕೃತ ಮೂಲಗಳಿಂದ ಮಾಹಿತಿಯನ್ನು ಪರಿಶೀಲಿಸದೆ ಯಾವುದೇ ವಿಡಿಯೋ ಅಥವಾ ಸುದ್ದಿಯನ್ನು ನಂಬಬೇಡಿ.
ನಿಮ್ಮ ಸುರಕ್ಷತೆ:
- ಯಾವುದೇ ಸರ್ಕಾರಿ ಅಧಿಕೃತ ಮೂಲಗಳಿಂದ (ಉದಾ: ಸಾರಿಗೆ ಇಲಾಖೆ, ಆನ್‌ಲೈನ್ ಫುಡ್ ಡೆಲಿವರಿ ಕಂಪನಿಗಳು) ಮಾಹಿತಿಯನ್ನು ಪರಿಶೀಲಿಸಿ.
- ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಪ್ಪಿಸಿ ಮತ್ತು ಇತರರಿಗೆ ಸಹ ಎಚ್ಚರಿಕೆ ನೀಡಿ.